ಪಾಲುದಾರ ಕೃಷಿ ನವೋದ್ಯಮ ಪೋಷಣಾ ಕೇಂದ್ರಗಳು

ಪಾಲುದಾರ ಕೃಷಿ ನವೋದ್ಯಮ ಪೋಷಣಾ ಕೇಂದ್ರಗಳು

ಕೃಷಿ ವಿಶ್ವವಿದ್ಯಾಲಯ, ಧಾರವಾಡವು ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯ ಜ್ಞಾನ ಪಾಲುದಾರರಾಗಿದ್ದು ಕೃಷಿ ವ್ಯವಹಾರ ಪೋಷಣ ಕೇಂದ್ರ (Agri Business Incubator) ಅಭಿವೃದ್ಧಿ ಪಡಿಸುವ ಉತ್ಕøಷ್ಟತಾ ಕೇಂದ್ರವಾಗಿದೆ. ದೇಶದೆಲ್ಲೇಡೆ 5 ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯ ಕೃಷಿ ನವೋದ್ಯಮ ಪೋಷಣಾ ಕೇಂದ್ರಗಳು ಇದ್ದು ಇವುಗಳಲ್ಲಿ ಕೃವಿವಿ ಧಾರವಾಡ ಕೇಂದ್ರವು ಪ್ರಮುಖವಾಗಿದೆ.

1. ಆನಂದ ಕೃಷಿ ವಿಶ್ವವಿದ್ಯಾಲಯ, ಆನಂದ ಗುಜರಾತ :

ಆನಂದ ಕೃಷಿ ವಿಶ್ವವಿದ್ಯಾಲಯವು ಆಹಾರ ಸಂಸ್ಕರಣಾ ವ್ಯವಹಾರ ಕೈಗೊಳ್ಳುವ ಪೋಷಣ ಕೇಂದ್ರ ಸ್ಥಾಪಿಸಿದ್ದು ಇದಕ್ಕೆ ಗುಜರಾತ ಉದ್ಯಮ ನೀತಿ-2009 ರನ್ವಯ ರಾಜ್ಯ ಸರ್ಕಾರದಿಂದ ಅನುದಾನವನ್ನು ಪಡೆಯಲಾಗಿದೆ. ಸದರಿ ಕೇಂದ್ರವು ಒಂದು ಉತ್ಕøಷ್ಟ ಅವಕಾಶವಾಗಿದ್ದು ವಿಶ್ಲೇಷಣಾತ್ಮಕ ಹಾಗೂ ಔದ್ಯಮಿಕ ಕೌಶಲ್ಯಗಳು, ಕೈಯಾಸರೆಯೊಂದಿಗೆ ಜ್ಞಾನ ಮತ್ತು ಆತ್ಮ ವಿಶ್ವಾಸವನ್ನು ತುಂಬುವ ಹಲವಾರು ಕೆಲಸಗಳನ್ನು ಈ ಯೋಜನೆಯ ಅನ್ವಯ ಕೈಗೆತ್ತಿಕೊಂಡಿದೆ. ಸದರಿ ಪೋಷಣ ಕೇಂದ್ರದ ಯೋಜನೆ ಅಡಿಯಲ್ಲಿ ತಾಂತ್ರಿಕತೆಗಳನ್ನು ಅಭಿವೃದ್ಧಿ ಪಡಿಸಿದ್ದು ಇತ್ತೀಚಿನ ಕೃಷಿ ಹಾಗೂ ಆಹಾರ ಸಂಸ್ಕರಣಾ ಯಂತ್ರಗಳನ್ನು ಒಳಗೊಂಡ ಎಂಟು ಪೈಲಟ್ ಯೋಜನೆಗಳನ್ನು ಹೊಂದಿದೆ.

ಈ ಕೇಂದ್ರವನ್ನು ದಿನಾಂಕ 30 ಸೆಪ್ಟೆಂಬರ್ 2018 ರಂದು ದೇಶದ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿಯವರು ಉದ್ಘಾಟಿಸಿದರು. ಸದ್ಯಕ್ಕೆ ಆರ್ಎಬಿಐ ಕೇಂದ್ರವು ಆಹಾರ ಸಂಸ್ಕರಣಾ ತಾಂತ್ರಿಕತೆ ಮಹಾವಿದ್ಯಾಲಯದ ಅಂಗವಾಗಿ ಕಾರ್ಯನಿರ್ವಹಿಸುತ್ತಿದೆ. ಎನ್ಎಬಿಎಲ್ ಮಾನ್ಯತೆ ಹೊಂದಿರುವ ಆಹಾರದ ಗುಣಮಟ್ಟವನ್ನು ಪರೀಕ್ಷಿಸುವ ಕೆಲವೇ ಕೆಲವು ಪ್ರಯೋಗಾಲಯಗಳಲ್ಲಿ ಇದು ಒಂದು ಆಗಿದೆ. ಇದಲ್ಲದೇ, ಪೀಡೆನಾಶಕ ಅವಶೇಷಗಳು ಉಳಿಕೆಯನ್ನು ಪರೀಕ್ಷಿಸುವ ಪ್ರಯೋಗಾಲಯ, ಅಂಗಾಂಶ ಕೃಷಿ ಪ್ರಯೋಗಾಲಯ, ಜೈವಿಕ ಗೊಬ್ಬರಗಳು, ತೋಟಗಾರಿಕಾ ನರ್ಸರಿ, ಬೇಕರಿ ಘಟಕ ಹಾಗೂ ಜಾನುವಾರು ಮತ್ತು ಕುಕುಟೋದ್ಯಮ ಕುರಿತಾದ ಚಟುವಟಿಕೆಗಳನ್ನು ಹಮ್ಮಿಕೊಂಡಿದ್ದು, ಗುಜರಾತ ಭಾಗದ ನವೋದ್ಯಮಿಗಳಿಗೆ ಹಾಗೂ ನೂತನವಾಗಿ ಉದ್ಯಮವನ್ನು ಕೈಗೊಳ್ಳಲುಬಯಸುವವರು ಇವರನ್ನು ಸಂಪರ್ಕಿಸಬಹುದು.

ಪಾಲುದಾರ ಕೃಷಿ ನವೋದ್ಯಮ ಪೋಷಣಾ ಕೇಂದ್ರದ ಅಂಕಿಅಂಶಗಳು:

ಆನಂದ ಕೃಷಿ ವಿಶ್ವವಿದ್ಯಾಲಯ:

  • 101 ಸ್ಟಾರ್ಟ್‌ಅಪ್‌ಗಳಿಗೆ ತರಬೇತಿ ನೀಡಲಾಗಿದೆ.
  • 20 ಸ್ಟಾರ್ಟ್‌ಅಪ್‌ಗಳು ಹಣಕಾಸಿನ ಬೆಂಬಲವನ್ನು ಪಡೆದಿವೆ.

ವಿಳಾಸ:

ಡಾ. ಆರ್. ಎಫ್. ಸುತಾರ,
ಪ್ರಾಧ್ಯಾಪಕರು ಮತ್ತು ಡೀನ್
ಕೃಷಿ ಮತ್ತು ಆಹಾರ ಸಂಸ್ಕರಣೆ ತಾಂತ್ರಿಕತೆ ಮತ್ತು ಜೈವಿಕ ಶಕ್ತಿ
ಆನಂದ ಕೃಷಿ ಮಹಾವಿದ್ಯಾಲಯ
ಆನಂದ-388 110

ಜಾಲತಾಣ:

www.aauincubator.in

ದೂರವಾಣಿ:

ಕಛೇರಿ : 02692-261302

2. ಡಾ. ಪಂಜಾಬರಾವ್ ದೇಶಮುಖ್ ಕೃಷಿ ವಿದ್ಯಾಪೀಠ, ಅಕೋಲಾ (ಮಹಾರಾಷ್ಟ್ರ)

ದಿನಾಂಕ 20 ಅಕ್ಟೋಬರ್ 1969 ರಂದು ಡಾ. ಪಂಜಾಬರಾವ್ ದೇಶಮುಖ್ ಇವರ ಹೆಸರಿನಲ್ಲಿ ಕೃಷಿ ವಿದ್ಯಾಪೀಠವನ್ನು ಅಕೋಲಾ (ಮಹಾರಾಷ್ಟ್ರ)ದಲ್ಲಿ ಸ್ಥಾಪಿಸಲಾಯಿತು. ಡಾ. ಪಂಜಾಬರಾವ್ ದೇಶಮುಖ್ರವರು ಮೂಲತ: ಕೃಷಿಕರು, ಮಣ್ಣಿನ ಮಗನಾಗಿದ್ದು ದೂರದೃಷ್ಟಿಯುಳ್ಳ ಒಬ್ಬ ಸಾಮಾಜಿಕ ಚಿಂತರಲ್ಲದೇ, ಖುಷ್ಕಿ ರೈತರ ನಿಜವಾದ ಆತ್ಮೀಯ ಗೆಳಯನಾಗಿದ್ದರು. ಈ ಕೃಷಿ ವಿಶ್ವವಿದ್ಯಾಲಯವು ಹಲವಾರು ಹೊಸ ಯೋಜನೆಗಳನ್ನು ಹಾಗೂ ಕೃಷಿಯಲ್ಲಿ ನೂತನ ಆಯಾಮಗಳನ್ನು ಅಳವಡಿಸಿಕೊಂಡು ಅವುಗಳನ್ನು ಮಾನವ ಸಂಪನ್ಮೂಲ ಅಭಿವೃದ್ಧಿ ಹಾಗೂ ನೂತನ ತಾಂತ್ರಿಕತೆಗಳನ್ನು ಬಳಸಿ ರೈತರಿಗೆ ಮುಟ್ಟಿಸುವ ಕೆಲಸವನ್ನು ವಿಶೆಷವಾಗಿ ಮಹಾರಾಷ್ಟ್ರದಲ್ಲಿ ಹಾಗೂ ದೇಶವ್ಯಾಪಿ ಮಾಡುತ್ತಿದೆ.

ಪಾಲುದಾರ ಕೃಷಿ ನವೋದ್ಯಮ ಪೋಷಣಾ ಕೇಂದ್ರದ ಅಂಕಿಅಂಶಗಳು:

ಡಾ. ಪಂಜಾಬರಾವ್ ದೇಶಮುಖ್ ಕೃಷಿ ವಿದ್ಯಾಪೀಠ

  • 19 ಸ್ಟಾರ್ಟ್‌ಅಪ್‌ಗಳಿಗೆ ತರಬೇತಿ ನೀಡಲಾಗಿದೆ.
  • 13 ಸ್ಟಾರ್ಟ್‌ಅಪ್‌ಗಳು ಹಣಕಾಸಿನ ಬೆಂಬಲವನ್ನು ಪಡೆದಿವೆ.

ವಿಳಾಸ:

ಡಾ. ಸಂತೋಷ ಜೆ. ಗಾವುಕರ,
ಅಸೋಸಿಯೇಟ್ ಡೀನ್,
ಆಹಾರ ತಂತ್ರಜ್ಞಾನ ವಿದ್ಯಾಲಯ. ಡಾ. ಪಿ.ಡಿ.ಕೆ.ವಿ, ಅಕೋಲಾ

ಜಾಲತಾಣ:

utkarshrabiakola.com

3. ರಾಷ್ಟ್ರೀಯ ಪಶು ಸಾಂಕ್ರಾಮಿಕ ರೋಗ ಶಾಸ್ತ್ರ ಮತ್ತು ರೋಗ ಮಾಹಿತಿ ಕೇಂದ್ರ  (ನಿವೇದಿ, ಬೆಂಗಳೂರು(ಕರ್ನಾಟಕ)) :

ಐಸಿಎಆರ್, ನಿವೇದಿ ಕೇಂದ್ರವು ದೇಶದ ಒಂದು ಪ್ರಮುಖ ಸಂಶೋಧನಾ ಸಂಸ್ಥೆಯಾಗಿದ್ದು, ಪಶು ಆರೋಗ್ಯ ಕುರಿತು ಉನ್ನತ ಸೌಲಭ್ಯಗಳೊಂದಿಗೆ ಪರಿಣಿತಿ ಸಿಬ್ಬಂದಿಯವರನ್ನು ಹೊಂದಿದ್ದು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸಂಸ್ಥೆಗಳೊಂದಿಗೆ ಸಂಪರ್ಕ ಹೊಂದಿದೆ. ಕೇಂದ್ರವು ಕೃಷಿ ಉದ್ಯಮಗಳನ್ನು ಕೃಷಿ ನೂತನ ತಾಂತ್ರಿಕತೆಗಳನ್ನು ಒಳಗೊಂಡ ಉದ್ಯಮ ಶೀಲತಾ ಅಭಿವೃದ್ಧಿಗೆ ಪ್ರಯತ್ನಿಸುತ್ತಿದೆ. ಸದರಿ ಸಂಸ್ಥೆಯು ಐಟಿಬಿಟಿ ಖ್ಯಾತಿಯ ಬೆಂಗಳೂರಿನಲ್ಲಿ ಇತ್ತೀಚೆಗೆ ಸ್ಥಾಪಿತವಾಗಿದೆ.

ಜಾನುವಾರು ವಲಯವು ದೇಶದ ಆರ್ಥಿಕತೆಗೆ ಸುಮಾರು ಶೇ. 5.6 ರಷ್ಟು ವಾರ್ಷಿಕ ಜಿಡಿಪಿಯನ್ನು ಒದಗಿಸುತ್ತಿದೆ. ಭಾರತ ದೇಶದಲ್ಲಿ ಅಸಂಖ್ಯ ಜೈವಿಕ ಜಾನುವಾರು ಸಂಪತ್ತು ಇದ್ದು ಹಲವಾರು ರೋಗ ರುಜಿನಗಳು ಹಬ್ಬಲು ಪ್ರಶಸ್ಥತಾಣವಾಗಿದೆ. ಸದರಿ ಕೇಂದ್ರದಲ್ಲಿ ಪಶು ವಿಜ್ಞಾನ ಕುರಿತಾದ ನವೋದ್ಯಮಗಳನ್ನು ಸ್ಥಾಪಿಸಲು ಹಾಗೂ ನವ್ಯ ಯೋಜನೆಗಳಿಗೆ ಮೂರ್ತಿ ರೂಪ ನೀಡಲು ಶ್ರಮಿಸುತ್ತಿದೆ.

ಪಾಲುದಾರ ಕೃಷಿ ನವೋದ್ಯಮ ಪೋಷಣಾ ಕೇಂದ್ರದ ಅಂಕಿಅಂಶಗಳು:

ರಾಷ್ಟ್ರೀಯ ಪಶು ಸಾಂಕ್ರಾಮಿಕ ರೋಗ ಶಾಸ್ತ್ರ ಮತ್ತು ರೋಗ ಮಾಹಿತಿ ಕೇಂದ್ರ:

  • 140 ಸ್ಟಾರ್ಟ್‌ಅಪ್‌ಗಳಿಗೆ ತರಬೇತಿ ನೀಡಲಾಗಿದೆ.
  • 44 ಸ್ಟಾರ್ಟ್‌ಅಪ್‌ಗಳು ಹಣಕಾಸಿನ ಬೆಂಬಲವನ್ನು ಪಡೆದಿವೆ.

ವಿಳಾಸ:

ನಿರ್ದೇಶಕರು,
ಐಸಿಎಆರ್-ನಿವೇದಿ , ಪೋಸ್ಟ್ ಬಾಕ್ಸ್ ನಂ : 6450,
ಯಲಹಂಕ, ಬೆಂಗಳೂರು-560064, ಕರ್ನಾಟಕ
Fax: 080-23093222

ಜಾಲತಾಣ:

naavic.org

ದೂರವಾಣಿ:

phone : 080-23093100/111

4. ಐಸಿಎಆರ್ ಕೇಂದ್ರೀಯ ಹತ್ತಿ ತಾಂತ್ರಿಕತೆಗಳ ಸಂಶೋಧನಾ ಸಂಸ್ಥೆ, ಮುಂಬೈ (ಮಹಾರಾಷ್ಟ್ರ)

ಭಾರತೀಯ ಕೃಷಿ ಅನುಸಂಧಾನ ಪರಿಷತ್ತಿನ ಪ್ರಮುಖ ಕೇಂದ್ರವಾದ ಕೇಂದ್ರೀಯ ಹತ್ತಿ ತಾಂತ್ರಿಕತೆಗಳ ಸಂಶೋಧನಾ ಸಂಸ್ಥೆಯನ್ನು ಮುಂಬೈನಲ್ಲಿ 1924 ರಲ್ಲಿ ಸ್ಥಾಪಿಸಲಾಗಿದ್ದು. ಹತ್ತಿ ಹಾಗೂ ಕೃಷಿ ಅಭಿವೃದ್ಧಿ ಗುಣಾತ್ಮಕತೆ ಹಾಗೂ ವಿವಿಧ ಉತ್ಪನ್ನಗಳ ಬಗ್ಗೆ ನಿರಂತರ ಸಂಶೋಧನೆಯನ್ನು ಕೇಂದ್ರವು ಕೈಗೊಳ್ಳುತ್ತಿದೆ.

ಸಿರ್ಕಾಟ್ ಎಂದೇ ಖ್ಯಾತವಾದ ಈ ಸಂಸ್ಥೆಯು ನೈಸರ್ಗಿಕ ನೂಲುಗಳನ್ನು ಹತ್ತಿ, ಬಾಳೆ ಹಾಗೂ ತೆಂಗುಗಳಿಂದ ಪರಿಷ್ಕರಿಸಿ ವಸ್ತ್ರ ಉತ್ಪಾದನೆ ಹಾಗೂ ಅನನ್ಯ ವಸ್ತ್ರ ಉತ್ಪಾದನೆಗಳನ್ನು ಪ್ರಸ್ಥಾಪಿಸುತ್ತಿದೆ. ನೈಸರ್ಗಿಕ ನಾರು ಅಥವಾ ನೂಲುಗಳನ್ನು ಒಳಗೊಂಡ ವಿವಿಧ ವಸ್ತುಗಳಿಗೆ ಮೌಲ್ಯ ವರ್ಧನೆ ಮಾಡುವುದಲ್ಲದೇ, ಪಾರ್ಟಿಕಲ್ ಬೋರ್ಡ ತಯಾರಿಕೆ, ಕಾಂಪೋಸ್ಟ್ ತಯಾರಿಕೆ, ನ್ಯಾನೋ ಸೈಲೋಲೂಸ್ ಉತ್ಪಾದನೆ ಹಾಗೂ ಹತ್ತಿ ಕಾಳು ಎಣ್ಣೆ ಉತ್ಪಾದಿಸುವ ಕಾರ್ಯಕ್ರಮಗಳನ್ನು ಅಳವಡಿಸಿಕೊಂಡಿದೆ. ಸಿರ್ಕಾಟ್ ಕೇಂದ್ರವು ಐಎಸ್ಓ -9001-2015 ಪ್ರಮಾಣ ಪತ್ರವನ್ನು ಹೊಂದಿದ್ದು ಎನ್ಎಬಿಎಲ್ ಮಾನ್ಯತೆ ಹೊಂದಿದ ಕೇಂದ್ರವಾಗಿದೆ. ಕಳೇದ ಒಂಭತ್ತು ದಶಕಗಳಿಂದ ಹತ್ತಿ ಮತ್ತು ಇತರ ಬೆಳೆಗಳ ತಾಂತ್ರಿಕತೆಗಳನ್ನು ಅಭಿವೃದ್ಧಿ ಪಡಿಸಿ ರೈತರಿಗೆ ತಲುಪಿಸುವ ಕೌಶಲ್ಯಾತ್ಮಕ ಕೇಂದ್ರವಾಗಿದ್ದು ನವೋದ್ಯಮಗಳನ್ನು ಹಾಗೂ ಕೃಷಿ ಆಧಾರಿತ ಉದ್ಯಮಗಳನ್ನು ಆರಂಭಿಸುವ ನಿಟ್ಟಿನಲ್ಲಿ ಪ್ರಮುಖ ಪೋಷಣಾ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತಿದೆ.

ಪಾಲುದಾರ ಕೃಷಿ ನವೋದ್ಯಮ ಪೋಷಣಾ ಕೇಂದ್ರದ ಅಂಕಿಅಂಶಗಳು:

ಐಸಿಎಆರ್ ಕೇಂದ್ರೀಯ ಹತ್ತಿ ತಾಂತ್ರಿಕತೆಗಳ ಸಂಶೋಧನಾ ಸಂಸ್ಥೆ:

  • 72 ಸ್ಟಾರ್ಟ್‌ಅಪ್‌ಗಳಿಗೆ ತರಬೇತಿ ನೀಡಲಾಗಿದೆ.
  • 41 ಸ್ಟಾರ್ಟ್‌ಅಪ್‌ಗಳು ಹಣಕಾಸಿನ ಬೆಂಬಲವನ್ನು ಪಡೆದಿವೆ.

ವಿಳಾಸ:

ಡಾ. ಎ. ಕೆ. ಭರಿಮಲ್,
ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥರು ಐ/ಸಿ.,
ತಂತ್ರಜ್ಞಾನ ವರ್ಗಾವಣೆ ಕೇಂದ್ರ,
ಪ್ರಧಾನ ಸಂಶೋಧಕರು , ಸಿರ್ಕಾಟ್ ,
ಐಸಿಎಆರ್ ಕೇಂದ್ರೀಯ ಹತ್ತಿ ತಾಂತ್ರಿಕತೆಗಳ ಸಂಶೋಧನಾ (ಐಸಿಎಆರ್ ಸಿರ್ಕಾಟ್) ಸಂಸ್ಥೆ,
ಅಂದೇವಾಲ ರೋಡ ಮಾತುಂಗಾ, ಮುಂಬೈ (ಮಹಾರಾಷ್ಟ್ರ)-400 019

ಜಾಲತಾಣ:

circotrabi.com

ದೂರವಾಣಿ:

ಕಛೇರಿ :022-24143718