"ಅಗ್ರಿಪ್ರಿನ್ಯೂರ್ಷಿಪ್ ಓರಿಯೆಂಟೇಷನ್ ಪ್ರೋಗ್ರಾಮ್ & ಸ್ಟಾರ್ಟ್-ಅಪ್ ಕೃಷಿ-ನವೋದ್ಯಮ ಪೋಷಣ" - ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ ೧೭ ನವೆಂಬರ್ ೨೦೨೦ ಸಮಯ ಸಂಜೆ ೫ ಘಂಟೆ. ನೋಂದಣಿ ಮಾರ್ಗಸೂಚಿಗಳು ಮುಂಬರುವ ಕಾರ್ಯಕ್ರಮಗಳು ಇದರಲ್ಲಿ ಪಡೆದುಕೊಳ್ಳಿ.

ಪಾಲುದಾರ ಕೃಷಿ ನವೋದ್ಯಮ ಪೋಷಣಾ ಕೇಂದ್ರಗಳು

ಕೃಷಿ ವಿಶ್ವವಿದ್ಯಾಲಯ, ಧಾರವಾಡವು ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯ ಜ್ಞಾನ ಪಾಲುದಾರರಾಗಿದ್ದು ಕೃಷಿ ವ್ಯವಹಾರ ಪೋಷಣ ಕೇಂದ್ರ (Agri Business Incubator) ಅಭಿವೃದ್ಧಿ ಪಡಿಸುವ ಉತ್ಕøಷ್ಟತಾ ಕೇಂದ್ರವಾಗಿದೆ. ದೇಶದೆಲ್ಲೇಡೆ ೫ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯ ಕೃಷಿ ನವೋದ್ಯಮ ಪೋಷಣಾ ಕೇಂದ್ರಗಳು ಇದ್ದು ಇವುಗಳಲ್ಲಿ ಕೃವಿವಿ ಧಾರವಾಡ ಕೇಂದ್ರವು ಪ್ರಮುಖವಾಗಿದೆ.


ಆನಂದ ಕೃಷಿ ವಿಶ್ವವಿದ್ಯಾಲಯ, ಆನಂದ್-ಗುಜರಾತ್
AAU, Anand

ಆನಂದ ಕೃಷಿ ವಿಶ್ವವಿದ್ಯಾಲಯವು ಆಹಾರ ಸಂಸ್ಕರಣಾ ವ್ಯವಹಾರ ಕೈಗೊಳ್ಳುವ ಪೋಷಣ ಕೇಂದ್ರ ಸ್ಥಾಪಿಸಿದ್ದು ಇದಕ್ಕೆ ಗುಜರಾತ ಉದ್ಯಮ ನೀತಿ-೨೦೦೯ ರನ್ವಯ ರಾಜ್ಯ ಸರ್ಕಾರದಿಂದ ಅನುದಾನವನ್ನು ಪಡೆಯಲಾಗಿದೆ. ಸದರಿ ಕೇಂದ್ರವು ಒಂದು ಉತ್ಕøಷ್ಟ ಅವಕಾಶವಾಗಿದ್ದು ವಿಶ್ಲೇಷಣಾತ್ಮಕ ಹಾಗೂ ಔದ್ಯಮಿಕ ಕೌಶಲ್ಯಗಳು, ಕೈಯಾಸರೆಯೊಂದಿಗೆ ಜ್ಞಾನ ಮತ್ತು ಆತ್ಮ ವಿಶ್ವಾಸವನ್ನು ತುಂಬುವ ಹಲವಾರು ಕೆಲಸಗಳನ್ನು ಈ ಯೋಜನೆಯ ಅನ್ವಯ ಕೈಗೆತ್ತಿಕೊಂಡಿದೆ. ಸದರಿ ಪೋಷಣ ಕೇಂದ್ರದ ಯೋಜನೆ ಅಡಿಯಲ್ಲಿ ತಾಂತ್ರಿಕತೆಗಳನ್ನು ಅಭಿವೃದ್ಧಿ ಪಡಿಸಿದ್ದು ಇತ್ತೀಚಿನ ಕೃಷಿ ಹಾಗೂ ಆಹಾರ ಸಂಸ್ಕರಣಾ ಯಂತ್ರಗಳನ್ನು ಒಳಗೊಂಡ ಎಂಟು ಪೈಲಟ್ ಯೋಜನೆಗಳನ್ನು ಹೊಂದಿದೆ. ಈ ಕೇಂದ್ರವನ್ನು ದಿನಾಂಕ ೩೦ ಸೆಪ್ಟೆಂಬರ್ ೨೦೧೮ ರಂದು ದೇಶದ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿಯವರು ಉದ್ಘಾಟಿಸಿದರು. ಸದ್ಯಕ್ಕೆ ಆರ್‍ಎಬಿಐ ಕೇಂದ್ರವು ಆಹಾರ ಸಂಸ್ಕರಣಾ ತಾಂತ್ರಿಕತೆ ಮಹಾವಿದ್ಯಾಲಯದ ಅಂಗವಾಗಿ ಕಾರ್ಯನಿರ್ವಹಿಸುತ್ತಿದೆ. ಎನ್‍ಎಬಿಎಲ್ ಮಾನ್ಯತೆ ಹೊಂದಿರುವ ಆಹಾರದ ಗುಣಮಟ್ಟವನ್ನು ಪರೀಕ್ಷಿಸುವ ಕೆಲವೇ ಕೆಲವು ಪ್ರಯೋಗಾಲಯಗಳಲ್ಲಿ ಇದು ಒಂದು ಆಗಿದೆ. ಇದಲ್ಲದೇ, ಪೀಡೆನಾಶಕ ಅವಶೇಷಗಳು ಉಳಿಕೆಯನ್ನು ಪರೀಕ್ಷಿಸುವ ಪ್ರಯೋಗಾಲಯ, ಅಂಗಾಂಶ ಕೃಷಿ ಪ್ರಯೋಗಾಲಯ, ಜೈವಿಕ ಗೊಬ್ಬರಗಳು, ತೋಟಗಾರಿಕಾ ನರ್ಸರಿ, ಬೇಕರಿ ಘಟಕ ಹಾಗೂ ಜಾನುವಾರು ಮತ್ತು ಕುಕುಟೋದ್ಯಮ ಕುರಿತಾದ ಚಟುವಟಿಕೆಗಳನ್ನು ಹಮ್ಮಿಕೊಂಡಿದ್ದು, ಗುಜರಾತ ಭಾಗದ ನವೋದ್ಯಮಿಗಳಿಗೆ ಹಾಗೂ ನೂತನವಾಗಿ ಉದ್ಯಮವನ್ನು ಕೈಗೊಳ್ಳಲುಬಯಸುವವರು ಇವರನ್ನು ಸಂಪರ್ಕಿಸಬಹುದು.


ಸಂಪರ್ಕಿಸಿ:

ಡಾ. ಆರ್.ಎಫ್. ಸುತಾರ್,
ಪ್ರಾಧ್ಯಾಪಕರು ಮತ್ತು ಡೀನ್,
ಕೃಷಿ ಮತ್ತು ಆಹಾರ ಸಂಸ್ಕರಣೆ ತಾಂತ್ರಿಕತೆ ಮತ್ತು ಜೈವಿಕ ಶಕ್ತಿ,
ಆನಂದ ಕೃಷಿ ಮಹಾವಿದ್ಯಾಲಯ,
ಆನಂದ, ಗುಜರಾತ್-388110
ಇಮೇಲ್: deanfpt@aau.in
ಕಚೇರಿ: +91 2692 261302
ಮೊಬೈಲ್: +91 99980 09965
ವೆಬ್‌ಸೈಟ್: www.aau.in


ಡಾ. ಪಂಜಾಬರಾವ್ ದೇಶಮುಖ್ ಕೃಷಿ ವಿದ್ಯಾಪೀಠ, ಅಕೋಲಾ-ಮಹಾರಾಷ್ಟ್ರ
PDKV, Akola

ದಿನಾಂಕ ೨೦ ಅಕ್ಟೋಬರ್ ೧೯೬೯ ರಂದು ಡಾ. ಪಂಜಾಬರಾವ್ ದೇಶಮುಖ್ ಇವರ ಹೆಸರಿನಲ್ಲಿ ಕೃಷಿ ವಿದ್ಯಾಪೀಠವನ್ನು ಅಕೋಲಾ, ಮಹಾರಾಷ್ಟ್ರ ದಲ್ಲಿ ಸ್ಥಾಪಿಸಲಾಯಿತು. ಡಾ. ಪಂಜಾಬರಾವ್ ದೇಶಮುಖ್‍ರವರು ಮೂಲತ: ಕೃಷಿಕರು, ಮಣ್ಣಿನ ಮಗನಾಗಿದ್ದು ದೂರದೃಷ್ಟಿಯುಳ್ಳ ಒಬ್ಬ ಸಾಮಾಜಿಕ ಚಿಂತರಲ್ಲದೇ, ಖುಷ್ಕಿ ರೈತರ ನಿಜವಾದ ಆತ್ಮೀಯ ಗೆಳಯನಾಗಿದ್ದರು. ಈ ಕೃಷಿ ವಿಶ್ವವಿದ್ಯಾಲಯವು ಹಲವಾರು ಹೊಸ ಯೋಜನೆಗಳನ್ನು ಹಾಗೂ ಕೃಷಿಯಲ್ಲಿ ನೂತನ ಆಯಾಮಗಳನ್ನು ಅಳವಡಿಸಿಕೊಂಡು ಅವುಗಳನ್ನು ಮಾನವ ಸಂಪನ್ಮೂಲ ಅಭಿವೃದ್ಧಿ ಹಾಗೂ ನೂತನ ತಾಂತ್ರಿಕತೆಗಳನ್ನು ಬಳಸಿ ರೈತರಿಗೆ ಮುಟ್ಟಿಸುವ ಕೆಲಸವನ್ನು ವಿಶೆಷವಾಗಿ ಮಹಾರಾಷ್ಟ್ರದಲ್ಲಿ ಹಾಗೂ ದೇಶವ್ಯಾಪಿ ಮಾಡುತ್ತಿದೆ.


ಸಂಪರ್ಕಿಸಿ:

ಡಾ. ಸಂತೋಷ ಗಾವೂಕರ,
ಅಸೋಸಿಯೇಟ್ ಡೀನ್,
ಆಹಾರ ತಂತ್ರಜ್ಞಾನ ವಿದ್ಯಾಲಯ,
ಡಾ. ಪಂಜಾಬರಾವ್ ದೇಶಮುಖ್ ಕೃಷಿ ವಿದ್ಯಾಪೀಠ,
ಅಕೋಲಾ, ಮಹಾರಾಷ್ಟ್ರ-444104
ಇಮೇಲ್: rabipdkv@gmail.com
ಮೊಬೈಲ್: +91 99210 04345
ವೆಬ್‌ಸೈಟ್: www.pdkv.ac.in


ರಾಷ್ಟ್ರೀಯ ಪಶು ಸಾಂಕ್ರಾಮಿಕ ರೋಗ ಶಾಸ್ತ್ರ ಮತ್ತು ರೋಗ ಮಾಹಿತಿ ಕೇಂದ್ರ, ಬೆಂಗಳೂರು-ಕರ್ನಾಟಕ
NIVEDI, Bengaluru

ಐಸಿಎಆರ್, ನೈವೇಡಿ ಕೇಂದ್ರವು ದೇಶದ ಒಂದು ಪ್ರಮುಖ ಸಂಶೋಧನಾ ಸಂಸ್ಥೆಯಾಗಿದ್ದು, ಪಶು ಆರೋಗ್ಯ ಕುರಿತು ಉನ್ನತ ಸೌಲಭ್ಯಗಳೊಂದಿಗೆ ಪರಿಣಿತಿ ಸಿಬ್ಬಂದಿಯವರನ್ನು ಹೊಂದಿದ್ದು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸಂಸ್ಥೆಗಳೊಂದಿಗೆ ಸಂಪರ್ಕ ಹೊಂದಿದೆ. ಕೇಂದ್ರವು ಕೃಷಿ ಉದ್ಯಮಗಳನ್ನು ಕೃಷಿ ನೂತನ ತಾಂತ್ರಿಕತೆಗಳನ್ನು ಒಳಗೊಂಡ ಉದ್ಯಮ ಶೀಲತಾ ಅಭಿವೃದ್ಧಿಗೆ ಪ್ರಯತ್ನಿಸುತ್ತಿದೆ. ಸದರಿ ಸಂಸ್ಥೆಯು ಐಟಿಬಿಟಿ ಖ್ಯಾತಿಯ ಬೆಂಗಳೂರಿನಲ್ಲಿ ಇತ್ತೀಚೆಗೆ ಸ್ಥಾಪಿತವಾಗಿದೆ. ಜಾನುವಾರು ವಲಯವು ದೇಶದ ಆರ್ಥಿಕತೆಗೆ ಸುಮಾರು ಶೇ. ೫.೬ ರಷ್ಟು ವಾರ್ಷಿಕ ಜಿಡಿಪಿಯನ್ನು ಒದಗಿಸುತ್ತಿದೆ. ಭಾರತ ದೇಶದಲ್ಲಿ ಅಸಂಖ್ಯ ಜೈವಿಕ ಜಾನುವಾರು ಸಂಪತ್ತು ಇದ್ದು ಹಲವಾರು ರೋಗ ರುಜಿನಗಳು ಹಬ್ಬಲು ಪ್ರಶಸ್ಥತಾಣವಾಗಿದೆ. ಸದರಿ ಕೇಂದ್ರದಲ್ಲಿ ಪಶು ವಿಜ್ಞಾನ ಕುರಿತಾದ ನವೋದ್ಯಮಗಳನ್ನು ಸ್ಥಾಪಿಸಲು ಹಾಗೂ ನವ್ಯ ಯೋಜನೆಗಳಿಗೆ ಮೂರ್ತಿ ರೂಪ ನೀಡಲು ಶ್ರಮಿಸುತ್ತಿದೆ.


ಸಂಪರ್ಕಿಸಿ:

ಪಿಐ-ಸಿಇಓ,
ನಾವಿಕ್ (ಆರ್-ಎಬಿಐ),
ಐಕಾರ್-ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವೆಟರ್ನರಿ ಎಪಿಡೆಮಿಯಾಲಜಿ ಅಂಡ್ ಡಿಸೀಸ್ ಇನ್ಫಾರ್ಮ್ಯಾಟಿಕ್ಸ್,
ಬೆಂಗಳೂರು, ಕರ್ನಾಟಕ-560064
ಇಮೇಲ್: naavic.rabi@gmail.com
ದೂರವಾಣಿ: +91 80 23093100/111, +91 80 23093222
ವೆಬ್‌ಸೈಟ್: www.nivedi.res.in


ಐಸಿಎಆರ್ ಕೇಂದ್ರೀಯ ಹತ್ತಿ ತಾಂತ್ರಿಕತೆಗಳ ಸಂಶೋಧನಾ ಸಂಸ್ಥೆ, ಮುಂಬೈ-ಮಹಾರಾಷ್ಟ್ರ
CIRCOT, Mumbai

ಭಾರತೀಯ ಕೃಷಿ ಅನುಸಂಧಾನ ಪರಿಷತ್ತಿನ ಪ್ರಮುಖ ಕೇಂದ್ರವಾದ ಕೇಂದ್ರೀಯ ಹತ್ತಿ ತಾಂತ್ರಿಕತೆಗಳ ಸಂಶೋಧನಾ ಸಂಸ್ಥೆಯನ್ನು ಮುಂಬೈನಲ್ಲಿ ೧೯೨೪ ರಲ್ಲಿ ಸ್ಥಾಪಿಸಲಾಗಿದ್ದು. ಹತ್ತಿ ಹಾಗೂ ಕೃಷಿ ಅಭಿವೃದ್ಧಿ ಗುಣಾತ್ಮಕತೆ ಹಾಗೂ ವಿವಿಧ ಉತ್ಪನ್ನಗಳ ಬಗ್ಗೆ ನಿರಂತರ ಸಂಶೋಧನೆಯನ್ನು ಕೇಂದ್ರವು ಕೈಗೊಳ್ಳುತ್ತಿದೆ. ಸಿರ್ಕಾಟ್ ಎಂದೇ ಖ್ಯಾತವಾದ ಈ ಸಂಸ್ಥೆಯು ನೈಸರ್ಗಿಕ ನೂಲುಗಳನ್ನು ಹತ್ತಿ, ಬಾಳೆ ಹಾಗೂ ತೆಂಗುಗಳಿಂದ ಪರಿಷ್ಕರಿಸಿ ವಸ್ತ್ರ ಉತ್ಪಾದನೆ ಹಾಗೂ ಅನನ್ಯ ವಸ್ತ್ರ ಉತ್ಪಾದನೆಗಳನ್ನು ಪ್ರಸ್ಥಾಪಿಸುತ್ತಿದೆ. ನೈಸರ್ಗಿಕ ನಾರು ಅಥವಾ ನೂಲುಗಳನ್ನು ಒಳಗೊಂಡ ವಿವಿಧ ವಸ್ತುಗಳಿಗೆ ಮೌಲ್ಯ ವರ್ಧನೆ ಮಾಡುವುದಲ್ಲದೇ, ಪಾರ್ಟಿಕಲ್ ಬೋರ್ಡ ತಯಾರಿಕೆ, ಕಾಂಪೋಸ್ಟ್ ತಯಾರಿಕೆ, ನ್ಯಾನೋ ಸೈಲೋಲೂಸ್ ಉತ್ಪಾದನೆ ಹಾಗೂ ಹತ್ತಿ ಕಾಳು ಎಣ್ಣೆ ಉತ್ಪಾದಿಸುವ ಕಾರ್ಯಕ್ರಮಗಳನ್ನು ಅಳವಡಿಸಿಕೊಂಡಿದೆ. ಸಿರ್ಕಾಟ್ ಕೇಂದ್ರವು ಐಎಸ್‍ಓ-೯೦೦೧-೨೦೧೫ ಪ್ರಮಾಣ ಪತ್ರವನ್ನು ಹೊಂದಿದ್ದು ಎನ್‍ಎಬಿಎಲ್ ಮಾನ್ಯತೆ ಹೊಂದಿದ ಕೇಂದ್ರವಾಗಿದೆ. ಕಳೇದ ಒಂಭತ್ತು ದಶಕಗಳಿಂದ ಹತ್ತಿ ಮತ್ತು ಇತರ ಬೆಳೆಗಳ ತಾಂತ್ರಿಕತೆಗಳನ್ನು ಅಭಿವೃದ್ಧಿ ಪಡಿಸಿ ರೈತರಿಗೆ ತಲುಪಿಸುವ ಕೌಶಲ್ಯಾತ್ಮಕ ಕೇಂದ್ರವಾಗಿದ್ದು ನವೋದ್ಯಮಗಳನ್ನು ಹಾಗೂ ಕೃಷಿ ಆಧಾರಿತ ಉದ್ಯಮಗಳನ್ನು ಆರಂಭಿಸುವ ನಿಟ್ಟಿನಲ್ಲಿ ಪ್ರಮುಖ ಪೋಷಣಾ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತಿದೆ.


ಸಂಪರ್ಕಿಸಿ:

ಡಾ. ಎ.ಕೆ. ಬಾರಿಮಲ್ಲಾ,
ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥರು ಐ/ಸಿ,
ತಂತ್ರಜ್ಞಾನ ವರ್ಗಾವಣೆ ಕೇಂದ್ರ,
ಪ್ರಧಾನ ಸಂಶೋಧಕರು, ಸಿರ್ಕಾಟ್
ಐಸಿಎಆರ್ ಕೇಂದ್ರೀಯ ಹತ್ತಿ ತಾಂತ್ರಿಕತೆಗಳ ಸಂಶೋಧನಾ ಸಂಸ್ಥೆ,
ಮುಂಬೈ, ಮಹಾರಾಷ್ಟ್ರ-400019
ಇಮೇಲ್: circotrabi@gmail.com
ಸಂಪರ್ಕಿಸಿ: +91 97028 78249, +91 22 24143718
ವೆಬ್‌ಸೈಟ್: www.circot.res.in

ಶ್ರೀ ಹೇಮಂತ್ ಲಡ್ಗಾಂವ್ಕರ್,
ವ್ಯವಹಾರ ವ್ಯವಸ್ಥಾಪಕ,
ಸರ್ಕೋಟ್-ಆರ್-ಎಬಿಐ
ಮೊಬೈಲ್: +91 88055 68064