"ಅಗ್ರಿಪ್ರಿನ್ಯೂರ್ಷಿಪ್ ಓರಿಯೆಂಟೇಷನ್ ಪ್ರೋಗ್ರಾಮ್ & ಸ್ಟಾರ್ಟ್-ಅಪ್ ಕೃಷಿ-ನವೋದ್ಯಮ ಪೋಷಣ" - ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ ೧೭ ನವೆಂಬರ್ ೨೦೨೦ ಸಮಯ ಸಂಜೆ ೫ ಘಂಟೆ. ನೋಂದಣಿ ಮಾರ್ಗಸೂಚಿಗಳು ಮುಂಬರುವ ಕಾರ್ಯಕ್ರಮಗಳು ಇದರಲ್ಲಿ ಪಡೆದುಕೊಳ್ಳಿ.

ಕೃಷಿಕ–ಕೃಷಿ ನವೋದ್ಯಮ ಪೋಷಣ ಕೇಂದ್ರ


“ಕೃಷಿಕ” – ಕೃಷಿ ನವೋದ್ಯಮ ಪೋಷಣ ಕೇಂದ್ರ ಕೃ. ವಿ. ವಿ., ಧಾರವಾಡ, ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ–ರಫ್ತಾರ ಘಟಕ, ಭಾರತ ಸರಕಾರದ ಕೃಷಿ ಹಾಗೂ ರೈತರ ಕಲ್ಯಾಣ ಸಚಿವಾಲಯ, ನವದೆಹಲಿ ಇವರ ಪ್ರಮುಖ ಯೋಜನೆಯಾಗಿರುತ್ತದೆ. ಕೃಷಿ ಉದ್ಯಮ ಸಂಬಂಧಿತ ನವೀನ ಯೋಚನೆ, ಯೋಜನೆ, ತಂತ್ರಜ್ಞಾನ, ವಿಚಾರಧಾರೆ ಹೊಂದಿರುವ ಯುವಕ-ಯುವತಿಯರು, ವಿದ್ಯಾರ್ಥಿ- ವಿದ್ಯಾರ್ಥಿನಿಯರು, ಪ್ರಗತಿಪರ ರೈತ/ರೈತ ಮಹಿಳೆಯರು ಹಾಗೂ ಆಸಕ್ತರಿಂದ ಕೃಷಿ ನವೋದ್ಯಮ ಸ್ಥಾಪನೆಗೆ ಪ್ರೋತ್ಸಾಹಿಸುವ ಕಾರ್ಯಕ್ರಮವಾಗಿರುತ್ತದೆ. ಸದರಿ ಕಾರ್ಯಕ್ರಮದಲ್ಲಿ ಆಯ್ಕೆಯಾದ ಸಂಭಾವ್ಯ ನವೋದ್ಯಮಿಗಳಿಗೆ ತಮ್ಮ ಪರಿಕಲ್ಪನೆ/ವಿನೂತನ ತಂತ್ರಜ್ಞಾನ/ಉತ್ಪನ/ಕೃಷಿ ಸೇವೆಯನ್ನು ವಾಣಿಜ್ಯೀಕರಣಗೊಳಿಸಲು ಕೃಷಿ ನವೋದ್ಯಮ ಪೋಷಣ ಕೇಂದ್ರದ ಮುಖಾಂತರ ಶಿಫಾರಸ್ಸು ಮಾಡಲಾಗುವದು. ಈ ಕಾರ್ಯಕ್ರಮದಲ್ಲಿ ನುರಿತ ಹಾಗೂ ಯಶಸ್ವಿ ನವೋದ್ಯಮ ಸ್ಥಾಪಕರಿಂದ ತರಬೇತಿ/ಪರಿಕಲ್ಪನಾ ಟಿಪ್ಪಣಿ/ತಂತ್ರಗಾರಿಕೆ ಹಾಗೂ ಪ್ರಾಯೋಗಿಕ ವಿವರಗಳನ್ನು ಒದಗಿಸಲಾಗುವುದು. ಅಲ್ಲದೇ, ಉದ್ಯಮವಲಯ ಹಾಗೂ ಮಾರುಕಟ್ಟೆ ಸವಾಲುಗಳನ್ನು ಎದುರಿಸುವ ತಂತ್ರಗಾರಿಕೆ ರೂಪಿಸುವ ಉದ್ಯಮಶೀಲತಾ ತರಬೇತಿ ನೀಡಲಾಗುವುದು.


ಉದ್ದೇಶಗಳು

೧. ಸಂಭಾವ್ಯ ಕೃಷಿ ಉದ್ಯಮಿಗಳಿಗೆ ತರಬೇತಿ ಹಾಗೂ ಮಾರ್ಗದರ್ಶನದ ಮೂಲಕ ವಿನೂತನ ಕೃಷಿ ನವೋದ್ಯಮ ಆರಂಭಿಸಲು ಪ್ರಾಯೋಗಿಕ, ತಾಂತ್ರಿಕ ಮತ್ತು ಔದ್ಯೋಗಿಕ ಮಾರ್ಗದರ್ಶನ ಒದಗಿಸುವುದು.


೨. ಕೃಷಿ ಉದ್ಯಮಗಳನ್ನು ಸ್ಥಾಪಿಸುವ ಸಂಭಾವ್ಯ ಅಭ್ಯರ್ಥಿಗಳಿಗೆ ಕೃಷಿ ನವೋದ್ಯಮ ಪೋಷಣ ಕೇಂದ್ರದ ಮೂಲಕ ಉತ್ತೇಜಿಸುವುದು.


೩. ಕೃಷಿ ನವೋದ್ಯಮ ಸ್ಥಾಪನೆಗೆ ಪೂರಕವಾಗಿರುವ ನಾವಿನ್ಯಪೂರ್ಣ ಯೋಜನೆ/ತಂತ್ರಜ್ಞಾನ/ವಿಚಾರದಾರೆ ಹೊಂದಿರುವವರಿಗೆ ಆಕರ್ಷಕ ಸ್ವಯಂವೃತ್ತಿ ನೆಲೆ ಒದಗಿಸುವುದು.


೪. ಅರ್ಹ ನವೋದ್ಯಮಿಗಳಿಗೆ ಸಮಯೋಚಿತ ಧನ ಸಹಾಯ ಒದಗಿಸುವುದು.


ಕೃಷಿ ವಿಶ್ವವಿದ್ಯಾಲಯದ, ಧಾರವಾಡ

UAS, Dharwad

ಕೃಷಿ ಶಿಕ್ಷಣ ಕ್ಷೇತ್ರದಲ್ಲಿ ಅಗ್ರಗಣ್ಯ, ಕೃಷಿ ವಿಶ್ವವಿದ್ಯಾಲಯ, ಧಾರವಾಡ ಕೃಷಿ ಶಿಕ್ಷಣ, ಸಂಶೋಧನೆ ಮತ್ತು ವಿಸ್ತರಣೆಯಲ್ಲಿ ಭಾರತದ ಅತ್ಯಂತ ಗೌರವಾನ್ವಿತ ಹೆಸರುಗಳಲ್ಲಿ ಒಂದಾಗಿದೆ. ಭಾರತೀಯ ಕೃಷಿ ಅನುಸಂಧಾನ ಪರಿಷತ್, ನವದೆಹಲಿಯಿಂದ ಮಾನ್ಯತೆ ಪಡೆದ (ಗ್ರೇಡ್ ಎ) ವಿಶ್ವವಿದ್ಯಾಲಯ, ಧಾರವಾಡ ವಿವಿಧ ಪಾಲುದಾರರ ಅಗತ್ಯತೆಗಳನ್ನು ಪೂರೈಸಲು ನಿರಂತರವಾಗಿ ನವೀಕರಿಸಿದ ಪಠ್ಯಕ್ರಮದೊಂದಿಗೆ ಗುಣಮಟ್ಟದ ಪದವಿ, ಸ್ನಾತಕೋತ್ತರ ಮತ್ತು ಡಿಪ್ಲೊಮಾ ಕಾರ್ಯಕ್ರಮಗಳನ್ನು ನೀಡುತ್ತದೆ. ವಿಶ್ವವಿದ್ಯಾಲಯವು 5 ಕಾಲೇಜುಗಳು, 30 ಸಂಶೋಧನಾ ಕೇಂದ್ರಗಳು, 6 ವಿಸ್ತರಣಾ ಶಿಕ್ಷಣ ಘಟಕಗಳು, 6 ಕೃಷಿ ವಿಜ್ಞಾನ ಕೇಂದ್ರ ಮತ್ತು ಕೃಷಿ ತಂತ್ರಜ್ಞಾನ ಮಾಹಿತಿ ಕೇಂದ್ರ ಹೊಂದಿದ್ದು ವಿಶ್ವವಿದ್ಯಾನಿಲಯವು ಉತ್ತರ ಕರ್ನಾಟಕದ 7 ಜಿಲ್ಲೆಗಳ ವ್ಯಾಪ್ತಿಯನ್ನು ಹೊಂದಿದೆ, ಭೌಗೋಳಿಕ ಪ್ರದೇಶದ ಶೇಕಡಾ 28, ಒಟ್ಟು ಸಾಗುವಳಿ ಪ್ರದೇಶದ ಶೇಕಡಾ 27 ಮತ್ತು ರಾಜ್ಯದ ಶೇಕಡಾ 14 ನೀರಾವರಿ ಪ್ರದೇಶವನ್ನು ಹೊಂದಿದೆ. ಒಣ-ಕೃಷಿ, ಭಾರಿ ಮಳೆ ಮತ್ತು ನೀರಾವರಿ ಪ್ರದೇಶಗಳಿಂದ ಹಿಡಿದು ಮಣ್ಣಿನ ಪ್ರಕಾರಗಳು, ಹವಾಮಾನ, ಸ್ಥಳಾಕೃತಿ ಮತ್ತು ಕೃಷಿ ಸನ್ನಿವೇಶಗಳಲ್ಲಿ ಹೆಚ್ಚಿನ ವೈವಿಧ್ಯತೆಯು ವೈವಿಧ್ಯಮಯ ಸಂಶೋಧನಾ ಅವಕಾಶಗಳನ್ನು ಒದಗಿಸುತ್ತದೆ. ಈ ಪ್ರದೇಶದ ಪ್ರಮುಖ ಬೆಳೆಗಳಲ್ಲಿ ಜೋಳ, ಹತ್ತಿ, ಭತ್ತ, ಬೇಳೆಕಾಳುಗಳು, ಮೆಣಸಿನಕಾಯಿ, ಕಬ್ಬು, ನೆಲಗಡಲೆ, ಸೂರ್ಯಕಾಂತಿ, ಗೋಧಿ, ಕುಸುಬೆ ಇತ್ಯಾದಿಗಳು ಸೇರಿವೆ.