ಕೃಷಿಕ್

ಕೃಷಿ ನವೋದ್ಯಮ ಪೋಷಣಾ ಕೇಂದ್ರ

ಶ್ರೇಷ್ಠತೆಯ ಕೇಂದ್ರ, ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ - ರಫ್ತಾರ ಭಾರತ ಸರ್ಕಾರದ ಕೃಷಿ ಹಾಗು ರೈತರ ಕಲ್ಯಾಣ ಸಚಿವಾಲಯದ ಜ್ಞಾನಪಾಲುದಾರ

ಕೃಷಿ ವಿಶ್ವವಿದ್ಯಾಲಯ ಧಾರವಾಡ, ಕರ್ನಾಟಕ

ಕೃಷಿಯು ದೇಶದ ಆರ್ಥಿಕತೆಯ ಮುಖ್ಯ ಆಧಾರವಾಗಿದ್ದು ಶೇಕಡಾ 70 ಕ್ಕಿಂತ ಹೆಚ್ಚು ಗ್ರಾಮೀಣ ಜನಸಂಖ್ಯೆ ಹಾಗು ಶೇಕಡಾ 50 ರಷ್ಟು ಜೀವನೋಪಾಯಕ್ಕಾಗಿ ಕೃಷಿಯನ್ನೇ ನಂಬಿಕೊಂಡಿದ್ದಾರೆ. ಭಾರತದಲ್ಲಿ ಕೃಷಿ ಉದ್ಯಮಗಳು ಮುನ್ನಡೆ ಸಾಧಿಸಿದರೂ, ಉತ್ತರ-ಕರ್ನಾಟಕದಲ್ಲಿ ಕೃಷಿ ನವೋದ್ಯಮ ಹೆಚ್ಚಿನ ಪ್ರಗತಿ ಕಾಣಬೇಕಾಗಿದೆ. ಈ ಭೂಪ್ರದೇಶವು ಕೃಷಿಗೆ ಮತ್ತು ಕೃಷಿತಂತ್ರಜ್ಞಾನಗಳ ಅಳವಡಿಕೆಗೆ ಪ್ರಕೃತಿದತ್ತವಾಗಿ ಹೆಚ್ಚಿನ ಅವಕಾಶಗಳನ್ನು ಹೊಂದಿದ್ದು ಕೃಷಿತಂತ್ರ ಜ್ಞಾನ ನವೋದ್ಯಮಗಳ ಕೆಲವು ಸಕಾರಾತ್ಮಕ ಪರಿಣಾಮಗಳು ಈ ಕೆಳಗಿನಂತಿವೆ.

 

ಉದ್ದೇಶಗಳು

  1. ನೂತನ ತಂತ್ರಜ್ಞಾನ / ಆಧಾರಿತ ತಳಿಗಳನ್ನು ಕೃಷಿ ನವೋದ್ಯಮ ಸಂಸ್ಕೃತಿಯನ್ನು ಪ್ರೋತ್ಸಾಹಿಸುವ ಮೂಲಕ “ಪ್ರಯೋಗಾಲಯದಿಂದ ಕೃಷಿ ಭೂಮಿಗೆ” ಧ್ಯೇಯವನ್ನು ಸಾಧಿಸುವುದು.
  2. ಕೌಶಲ್ಯ ಅಭಿವೃದ್ಧಿ, ಸಾಮರ್ಥ್ಯ ವೃದ್ಧಿ, ಕೃಷಿ ಮತ್ತು ಸಂಬಂಧಿತ ವಲಯದಲ್ಲಿ ನಾವೀನ್ಯತೆ, ಉದ್ಯಮಶೀಲತೆ ಮತ್ತು ವ್ಯಾಪಾರ ದೃಷ್ಟಿಯನ್ನು ಉತ್ತೇಜಿಸುವುದು.
  3. ಗ್ರಾಮೀಣ ಪ್ರದೇಶಗಳ ಯುವಕರಿಗೆ ಉದ್ಯೋಗಾವಕಾಶಗಳನ್ನು ಕಲ್ಪಿಸುವುದು.
  4. ತಂತ್ರಜ್ಞಾನ ಸಂಶೋಧನೆ ಮತ್ತು ಅಭಿವೃದ್ಧಿಗಳ ವಾಣಿಜ್ಯ್ ಕರಣಕ್ಕಾಗಿ ಸಮಗ್ರ ವಿಧಾನಗಳನ್ನು ಅಭಿವೃದ್ಧಿಗೊಳಿಸುವುದು.
  5. ಆರಂಭಿಕ ಕೃಷಿ- ಪರಿಸರ ವ್ಯವಸ್ಥೆಯನ್ನು ಹೆಚ್ಚು ಪರಿಣಾಮಕಾರಿಯಾಗಿ, ತಾಂತ್ರಿಕ, ಕಾನೂನು, ಹಣಕಾಸು, ಬೌದ್ಧಿಕ ಆಸ್ತಿ ಮತ್ತು ಸಂಬಂಧಿತ ಸೇವೆಗಳನ್ನು ಒಳಗೊಂಡಂತೆ ಮೌಲ್ಯವರ್ಧಿತ ಸೇವೆಗಳಿಗೆ ಪ್ರೋತ್ಸಾಹಿಸುವುದು .
  6. ಕೃಷಿ ನವೋದ್ಯಮ ಕೈಗಾರಿಕೆ ಸ್ಥಾಪಿಸಲು ಹಣಕಾಸು ಸಹಾಯ ಸಂಭಂದಿತ ಸಂಸ್ಥೆಗಳ ಜಾಲವನ್ನು ಅಭಿವೃದ್ಧಿ ಪಡಿಸುವುದು.
  7. ಸದ್ಯ ಅಸ್ತಿತ್ವದಲ್ಲಿರುವ ಕೃಷಿ ನವೋದ್ಯಮ ಪೋಷಣ ಕೇಂದ್ರಗಳ ಸಾಮರ್ಥ್ಯವನ್ನು ಬಲಪಡಿಸುವುದು.
  8. ಸ್ಥಳೀಯ ಮತ್ತು ಜಾಗತಿಕ ಕೃಷಿ ವ್ಯವಹಾರ ಸವಾಲುಗಳನ್ನು ಸ್ಪರ್ಧಾತ್ಮಕವಾಗಿ ಎದುರಿಸಲು ಪರಿಹಾರವನ್ನು ಒದಗಿಸುವುದು.

ನಮ್ಮ ಪ್ರಗತಿ ಪಕ್ಷಿನೋಟ:

175 ಕೃಷಿ ನವೋದ್ಯಮಗಳಿಗೆ ತರಬೇತಿ

69 ಕೃಷಿ ನವೋದ್ಯಮಿಗಳಿಗೆ ಹಣಕಾಸಿನ ಅನುದಾನ

300+ ಉದ್ಯೋಗಗಳ ಸೃಷ್ಟಿ

90+ ಕೃಷಿ ನವೋದ್ಯಮಗಳಿಗೆ ಕಾರ್ಯಕ್ರಮಗಳು

ನಮ್ಮ ಸೇವೆಗಳು

ನವೋದ್ಯಮ ಪೋಷಣ

' ಕೃಷಿಕ್ ' ನವೋದ್ಯಮ ಪೋಷಣ ಕೇಂದ್ರವು ದೂರಗಾಮಿ ಕೃಷಿ ನವೋದ್ಯಮಗಳಿಗೆ ನವೀನ ಉತ್ಪನ್ನ ಹಾಗೂ ಸೇವೆಗಳನ್ನು ಪರಿಚಯಿಸಲು / ಬಿಡುಗಡೆ ಮಾಡಲು ಕೇಂದ್ರೀಕೃತ ಪರಿಹಾರ ಒದಗಿಸುತ್ತದೆ.

ಈ ಕೇಂದ್ರದಲ್ಲಿ ನವೋದ್ಯಮಗಳಿಗೆ ವಾಣಿಜ್ಯ, ಮಾರುಕಟ್ಟೆ ಹಾಗೂ ಹಣಕಾಸಿನ ವ್ಯವಸ್ಥೆಗಳನ್ನು ರೂಪಿಸಲು ಸಹಾಯವಾಗುವಂತೆ ಅವರಿಗೆ ಬೇಕಾಗುವ ತಂತ್ರಜ್ಞಾನ ನಿರ್ವಹಣೆ/ ಆಡಳಿತ ಹಾಗೂ ಕಾರ್ಯತಾಂತ್ರಿಕ ಸಲಹೆಗಳನ್ನು ಒದಗಿಸಲಾಗುತ್ತದೆ.

    • ಸೌಲಭ್ಯಗಳು

    ಸಹ ಕಾರ್ಯ ವಲಯ

    Co-Working Space

    ಸಹ ಕಾರ್ಯ ವಲಯ

    Co-Working Space

    ಸಹ ಕಾರ್ಯ ವಲಯ

    Co-Working Space

    ಸಭೆ ಕೊಠಡಿ

    Meeting Room

    ಸಮ್ಮೇಳನ ಕೊಠಡಿ

    Conference Room

    ಕೊಠಡಿ

    Pantry

    ಕೊಠಡಿ

    Pantry

    ಗ್ರಂಥಾಲಯ

    Library

    ಸಭೆ ಕೊಠಡಿ

    Meeting Room

ಮಾರ್ಗದರ್ಶನ:

    1. ' ಕೃಷಿಕ್ ' ನವೋದ್ಯಮ ಪೋಷಣ ಕೇಂದ್ರವು ನವೋದ್ಯಮಗಳಿಗೆ ಹೂಡಿಕೆದಾರರ, ತಂತ್ರಜ್ಞಾನಿಗಳ ಹಾಗೂ ಸಲಹೆಗಾರರ ಮುಖಾಂತರ ಉನ್ನತಮಟ್ಟದ ಮಾರ್ಗದರ್ಶನವನ್ನು ಒದಗಿಸುತ್ತದೆ.
    1. ನವೋದ್ಯಮ ಕಾರ್ಯಕ್ರಮಗಳಲ್ಲಿ ಆಯ್ಕೆಗೊಂಡ ನವೋದ್ಯಮ ತಂಡಗಳು ನುರಿತ ಮಾರ್ಗದರ್ಶಕರ ಸಲಹೆ ಪಡೆದುಕೊಳ್ಳುತ್ತಾರೆ. ಮಾರ್ಗದರ್ಶಕರೊಂದಿಗೆ ದಿನನಿತ್ಯ ಕಾರ್ಯನಿರ್ವಹಿಸಿ, ಅವರ ಅನುಭವಗಳನ್ನು ಕೇಳಿಸಿಕೊಂಡು ಹಾಗೂ ಅವರ ಅಮೂಲ್ಯ ಒಳನೋಟಗಳು ಮತ್ತು ಪ್ರತಿಕ್ರಿಯೆಗಳನ್ನು ಸ್ವೀಕರಿಸಿ ತಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದು.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:

ವಿಳಾಸ:

ಡಾ.ಎಸ್. ಎಸ್. ಡೊಳ್ಳಿ
ಪ್ರಧಾನ ಸಂಶೋಧಕರು ಹಾಗು ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು,
ಕೃಷಿಕ್-ಕೃಷಿ ನವೋದ್ಯಮ ಪೋಷಣ ಕೇಂದ್ರ
ಕೃಷಿ ವಿಶ್ವವಿದ್ಯಾಲಯ ,
ಧಾರವಾಡ -580005 (ಕರ್ನಾಟಕ )

ದೂರವಾಣಿ:

0836-2214392

ಜಾಲತಾಣ:

uasd.edu