“ಆವಿಷ್ಕಾರ”

ಕೃಷಿ ನವೋದ್ಯಮ ಪೋಷಣ ಕಾರ್ಯಕ್ರಮ

“ಆವಿಷ್ಕಾರ”– ಕೃಷಿ ನವೋದ್ಯಮ ಪೋಷಣ ಕಾರ್ಯಕ್ರಮ

ಕೃಷಿ ನವೋದ್ಯಮ ಪೋಷಣ ಕಾರ್ಯಕ್ರಮದಡಿಯಲ್ಲಿ ಕೃಷಿ ಮತ್ತು ಕೃಷಿ ಪೂರಕವಾದ ನವೋದ್ಯಮಗಳಿಗೆ ಕನಿಷ್ಠ ಕಾರ್ಯಸಾಧ್ಯÀ (miಟಿimum viಚಿbಟe ಠಿಡಿoಜuಛಿಣ) ನಾವೀನ್ಯಪೂರ್ಣ ಪರಿಹಾರ/ಪ್ರಕ್ರಿಯೆ/ಉತ್ಪನ್ನ/ಉದ್ಯಮ ಮಾದರಿಯನ್ನು ವಾಣಿಜ್ಯಿಕರಿಸಲು, ಮೇಲ್ಮಟ್ಟಕ್ಕೆ ಹೆಚ್ಚಿಸಲು ಮತ್ತು ತ್ವರಿತವಾಗಿ ಯಶಸ್ವಿಗೊಳಿಸಲು ಸಹಕರಿಸಲಾಗುವುದು. ಈ ಕಾರ್ಯಕ್ರಮದಲ್ಲಿ ಅಭ್ಯರ್ಥಿಗಳ ಪರಿಹಾರ/ ಪ್ರಕ್ರಿಯೆ/ ಉತ್ಪನ್ನ/ ಉದ್ಯಮ ಮಾದರಿ ಇತ್ಯಾದಿಗಳನ್ನು ಮೇಲ್ದರ್ಜೆಗೇರಿಸಲು ಬೇಕಾಗುವ ಬಂಡವಾಳವನ್ನು ವಾಣಿಜ್ಯ ಬ್ಯಾಂಕ/ ಹಣಕಾಸು ಸಂಸ್ಥೆ /ಬಂಡವಾಳ ಶಾಹಿಗಳಿಂದ ಆಕರ್ಷಿಸಲು ಅನುಕೂಲ ಮಾಡಿಕೊಡಲಾಗುವುದು. ಎರಡು ತಿಂಗಳ ತರಬೇತಿಯನ್ನು ಯಶಸ್ವಿಯಾಗಿ ಪೂರೈಸಿದ ಅಭ್ಯರ್ಥಿಗಳಿಗೆ ಕೃಷಿ ನವೋದ್ಯಮ ಪೋಷಣ ಕೇಂದ್ರದ ಮುಖಾಂತರ ಕಾರ್ಯಸಾಧುವಾದ ವಿವಿಧ ಕೃಷಿ ಉದ್ಯಮ ಆರಂಭಿಸುವ ಯೋಚನಾ ಲಹರಿ/ತಂತ್ರಜ್ಞಾನ/ಕೃಷಿ ಸೇವೆ ಇತ್ಯಾದಿಗಳನ್ನು ವಿಸ್ತರಿಸಲು ಮಾರ್ಗದರ್ಶನ ನೀಡಲಾಗುವುದು. ಸದರಿ ನವೋದ್ಯಮಿಗಳು ರೂ. 25.00 ಲಕ್ಷದವರೆಗಿನ ಧನಸಹಾಯಕ್ಕೆ ಅರ್ಹರಾಗಿರುತ್ತಾರೆ. ಅರ್ಜಿದಾರರ ನೈಜ ಅವಶ್ಯಕತೆಗಳಿಗೆ ಉದ್ಯಮ ಯೋಜನೆಯ ಮೌಲ್ಯಮಾಪನಗನುಗುಣವಾಗಿ ಆಯ್ಕೆ ಸಮಿತಿಯಿಂದ ನಿರ್ಧರಿಸಲಾಗುವುದು. ಈ ಸಂಬಂಧ ಆಯ್ಕೆ ಸಮಿತಿಯ ನಿರ್ಣಯವು ಅಂತಿಮವಾಗಿರುತ್ತದೆ.

 • 01 ಉದ್ದೇಶಗಳು:
   1. ಅರ್ಹ ನವೋದ್ಯಮಿಗಳಿಗೆ ಸಮಯೋಚಿತ ಧನ ಸಹಾಯ ಒದಗಿಸುವುದು
   1. ಕನಿಷ್ಠ ಕಾರ್ಯಸಾಧ್ಯವಾದ ಉತ್ಪನ್ನ/ಸೇವೆಗಳನ್ನು ಮಾರಾಟ ಹಂತಕ್ಕೆ ಪರಿವರ್ತಿಸಲು/ಮೇಲ್ದರ್ಜೆಗೆರಿಸಲು ಸಹಕಾರ ನೀಡುವುದು
   1. ನಾವೀನ್ಯಪೂರ್ಣ ಪರಿಹಾರ/ಪ್ರಕ್ರಿಯೆ/ಉತ್ಪನ್ನ/ಉದ್ಯಮ ಮಾದರಿಯ ಕನಿಷ್ಠ ಕಾರ್ಯಸಾಧ್ಯವಾದ ಉತ್ಪನ್ನ/ಸೇವೆಗಳನ್ನು ತ್ವರಿತವಾಗಿ ಪರೀಕ್ಷಿಸಲು/ಮಾರ್ಪಡಿಸಲು ಸೂಕ್ತ ವೇದಿಕೆ ಒದಗಿಸುವುದು
   1. ಅರ್ಜಿದಾರರು ಕಾನೂನುರಿತ್ಯ ನೊಂದಾಯಿತ ಭಾರತ ದೇಶದ ಘಟಕವಾಗಿರಬೇಕು.
   1. ಅರ್ಜಿದಾರರು ಭಾರತಿಯ ಮೂಲದ ಕೈಗಾರಿಕಾ ನೀತಿ ಮತ್ತು ಅಭಿವೃದ್ದಿ ಇಲಾಖೆ (ಆIPP) ಅಧಿಸೂಚನೆಯನ್ವಯ ನವೋದ್ಯಮಿಗಳಾಗಿರಬೇಕು (sಣಚಿಡಿಣuಠಿ). ಬಹುರಾಷ್ಟ್ರೀಯ ಸಂಸ್ಥೆಗಳು/ಅಂಗ ಸಂಸ್ಥೆಗಳು ಮತ್ತು ಅಂತರಾಷ್ಟ್ರೀಯ ಸಂಸ್ಥೆಗಳಿಗೆ ಸದರಿ ಕಾರ್ಯಕ್ರಮ ಅನ್ವಯವಾಗುವುದಿಲ್ಲ.
   1. ಈಗಾಗಲೇ ಸರ್ಕಾರದ ವಿವಿಧ ಇಲಾಖೆಗಳಿಂದ ಧನಸಹಾಯ ಪಡೆದ ನವೋದ್ಯಮಗಳು ಸದರಿ ಕಾರ್ಯಕ್ರಮಕ್ಕೆ ಅರ್ಹರಿರುವುದಿಲ್ಲ.
   1. “ಕೃಷಿಕ” – ಕೃಷಿ ನವೋದ್ಯಮ ಪೋಷಣ ಕೇಂದ್ರ ಕೃವಿವಿ., ಧಾರವಾಡದಿಂದ ಆಯ್ಕೆ ಮಾಡಲಾಗುವುದು.
   1. ಎರಡು ತಿಂಗಳ ಸನಿವಾಸ ಕಾರ್ಯಕ್ರಮದ ತರುವಾಯ ನವೋದ್ಯಮಗಳ ಕಾರ್ಯಕ್ಷಮತೆಯ ಆಧಾರದ ಮೇಲೆ ಧನಸಹಾಯಕ್ಕಾಗಿ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ – ರಫ್ತಾರ ಘಟಕ, ಭಾರತ ಸರಕಾರದ ಕೃಷಿ ಹಾಗೂ ರೈತರ ಕಲ್ಯಾಣ ಸಚಿವಾಲಯ, ನವದೆಹಲಿ ಇವರಿಗೆ ಶಿಫಾರಸ್ಸು ಮಾಡಲಾಗುವುದು.
   1. ಕೃಷಿ ನವೋದ್ಯಮದ ಕಾರ್ಯ ಸಾಧ್ಯವಾದ ನವೀನ ಪರಿಕಲ್ಪನೆ ಹೊಂದಿರುವ 20 ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು. ಪ್ರಾಥಮಿಕವಾಗಿ ಆಯ್ಕೆಯಾದ ಅಭ್ಯರ್ಥಿಗಳು ತಮ್ಮ ಪ್ರಸ್ತಾವನೆಯನ್ನು ಸಮಿತಿಯ ಮುಂದೆ ಮಂಡಿಸಲು ಸ್ವಂತ ಖರ್ಚಿನ ಮೇಲೆ ಹಾಜರಾಗಬೇಕಾಗುವುದು.
 • ಸದರಿ ಕಾರ್ಯಕ್ರಮದಲ್ಲಿ ಖಾಸಗಿ ಭಾಗಿದಾರರ ಪಾಲಗಾರಿಕೆಯನ್ನು ಖಚಿತ ಪಡಿಸಲುಸ ಯೋಜನಾ ವೆಚ್ಚದ ಶೇ 15 ರಷ್ಟನ್ನು ನವೋದ್ಯಮಿಗಳು ಭರಿಸಬೇಕು. ಇನ್ನುಳಿದ ಶೇ. 85 ರಷ್ಟು ಯೋಜನಾ ವೆಚ್ಚವನ್ನು (ಗರಿಷ್ಠ ರೂ. 25 ಲಕ್ಷ ಮಿತಿಗೆ ಒಳಪಟ್ಟು) ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯ ರಫ್ತಾರ ಘಟಕದ ಮೂಲಕ 3 ಕಂತುಗಳಲ್ಲಿ ಒದಗಿಸಲಾಗುವುದು.

   1. ಕೃಷಿ ನವೋದ್ಯಮ ಪೋಷಣಾ ಕೇಂದ್ರ, ಕೃವಿವಿ, ಧಾರವಾಡ ಹಾಗೂ ನವೋದ್ಯಮಿಗಳ ನಡುವೆ ಏರ್ಪಡುವ ಒಡಂಬಡಿಕೆಗೆ ಅನುಗುಣವಾಗಿ ಶೇ. 40 ರಷ್ಟು ಅನುದಾನವನ್ನು ಮೊದಲ ಕಂತಿನ ಬೀಜನಿಧಿಯಾಗಿ ಬಿಡುಗಡೆ ಮಾಡಲಾಗುವುದು.
   1. ಶೇ. 40 ರಷ್ಟು ಎರಡನೇ ಕಂತನ್ನು, ನವೋದ್ಯಮಿಗಳ ಸಾಧನೆಯ ಮೈಲಿಗಲ್ಲುಗಳನ್ನು ಪರಿಗಣಿಸಿ ಪೋಷಣಾ ಕೇಂದ್ರದ ಸಮೀತಿಯ ನಿರ್ದೇಶನದಂತೆ ಹಾಗೂ ಶೇ. 40ರ ಮೊದಲ ಕಂತಿನ ಬಳಕೆ ಪ್ರಮಾಣಪತ್ರವನ್ನು ಅನುಸರಿಸಿ ಒದಗಿಸಲಾಗುವುದು.
   1. ಕೊನೆಯ ಕಂತಾಗಿ ಶೇ. 20 ರಷ್ಟು ಅನುದಾನವನ್ನು ನವೋಕ್ಯಮಿಗಳ ಕಾರ್ಯಕ್ಷಮತೆ ಮತ್ತು ಸಾಧನೆಯ ಮೈಲಿಗಲ್ಲುಗಳನ್ನು ಆಧರಿಸಿ ‘ಕೃಷಿಕ’ ಕೃಷಿ ನವೋದ್ಯಮ ಪೋಷಣಾ ಕೇಂದ್ರದ ಶಿಫಾರಸ್ಸು ಆಧರಿಸಿ ಹಾಗೂ ಈಗಾಗಲೇ ಬಿಡುಗಡೆಯಾದ ಮೊತ್ತದ ಶೇ. 80 ರಷ್ಟು ಅನುದಾನಕ್ಕೆ ಬಳಕೆ ಪ್ರಮಾಣಪತ್ರವನ್ನು ಒದಗಿಸಿದ ನಂತರ ಬಿಡುಗಡೆ ಮಾಡಲಾಗುವುದು.
 • ಕಾರ್ಯಕ್ರಮ ಅನುಷ್ಠಾನಕ್ಕಾಗಿ ವಿವಿಧ ಬಾಬತ್ತುಗಳಿಗಾಗಿ ಬಳಸಬಹುದಾದ ಚಟುವಟಿಕೆಗಳ ವೆಚ್ಚದ ವಿವರವನ್ನು ಈ ಕೆಳಗೆ ನೀಡಲಾಗಿದೆ.

   1. ಉತ್ಪನ್ನಗಳ ಪರಿಷ್ಕರಣೆ/ಪರೀಕ್ಷೆ ಮತ್ತು ಪ್ರಾಯೋಗಿಕ ವ್ಯಾಪಾರ ಹಾಗೂ ಮಾರುಕಟ್ಟೆ ಬಿಡುಗಡೆ.
   1. ಮಾಹಿತಿ/ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಕಾರ್ಯಕ್ರಮಗಳಿಗೆ ಸಂಬಂಧಿಸಿದ ಅಂಕಿಸಂಖ್ಯೆ ಮಾಹಿತಿ/ ದತ್ತಾಂಶ ಉತ್ಪಾದನೆ/ಸಂಗ್ರಹಣೆ ಇವೇ ಮೊದಲಾದ ವಿಷಯಗಳಿಗೆ ಮಾಡಿದ ವೆಚ್ಚ
   1. ಬೌದ್ಧಿಕ ಆಸ್ತಿ ಶುಲ್ಕ/ ಒಂದುಬಾರಿ ಪಾವತಿಸಬಹುದಾದ ಪರವಾನಿಗೆ ಶುಲ್ಕ
   1. ದೈನಂದಿನ ಚಟುವಟಿಕೆಗಳನ್ನು ಕೈಗೊಳ್ಳಲು ಬೇಕಾಗುವ ಮಾನವ ಸಂಪನ್ಮೂಲ
   1. ದೈನಿಕ ಕಾರ್ಯಗಳಿಗೆ ಬೇಕಾಗುವ ವಿದ್ಯುತ್ ವೆಚ್ಚ, ಪೋಷಣಾ ಕೇಂದ್ರದ ಶುಲ್ಕ ಇತ್ಯಾದಿ
   1. ಕೃಷಿಕ ಪೋಷಣಾ ಕೇಂದ್ರದ ಶಿಫಾರಸ್ಸಿನನ್ವಯ ಅಗತ್ಯವೆಂದು ಪರಿಗಣಿಸಲಾದ ವೆಚ್ಚಗಳು.
 

ಪ್ರಮುಖ ಕ್ಷೇತ್ರಗಳು:

 • ಸಾವಯವ ಕೃಷಿ/ಜೈವಿಕ ಪರಿಕರಗಳು

 • ಕೋಯ್ಲೋತ್ತರ/ಆಹಾರ ತಂತ್ರಜ್ಞಾನ

 • ಪಶುಸಂಗೋಪನೆ/ಹೈನುಗಾರಿಕೆ

 • ಕೃಷಿ ಶಿಕ್ಷಣ ವಿಸ್ತರಣೆ

 • ಕೃಷಿ ಪರಿಕರ/ಸಾಧನ ತಂತ್ರಜ್ಞಾನ

 • ನಿಖರ ಕೃಷಿ

 • ಆಹಾರ ಸಂಸ್ಕರಣೆ

 • ಎರೆ ಕೃಷಿ/ಕಸದಿಂದ ರಸ/ತ್ಯಾಜ್ಯ ವಿಲೆವಾರಿ

 • ಕೃಷಿ ಸರಬರಾಜು ಸರಪಳಿ

 • ಕೃತಕ ಬುದ್ದಿಮತ್ತೆ/ಮಾಹಿತಿ/ಜಾಲತಾಣ ತಂತ್ರಜ್ಞಾನ

 • ಕೃಷಿ ಯಾಂತ್ರಿಕರಣ

 • ಕೃಷಿ ಚಿಕಿತ್ಸೆ/ಆರೋಗ್ಯ ಸೇವೆಗಳು

 • ಕೃಷಿ ಜೈವಿಕ ತಂತ್ರಜ್ಞಾನ

 • ನೈಸರ್ಗಿಕ ಸಂಪನ್ಮೂಲ ನಿರ್ವಹಣೆ

 • ಕೃಷಿ ತಾಂತ್ರಿಕತೆಗಳು

ಮಾಹಿತಿಗಾಗಿ ಸಂಪರ್ಕಿಸಿ:

ವಿಳಾಸ:

ಪ್ರಧಾನ ಸಂಶೋಧಕರು ಹಾಗೂ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳು
“ಕೃಷಿಕ” – ಕೃಷಿ ನವೋದ್ಯಮ ಪೋಷಣ ಕೇಂದ್ರ
ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯ ರಫ್ತಾರ ಘಟಕ
ಕೃಷಿ ವಿಶ್ವವಿದ್ಯಾಲಯ, ಧಾರವಾಡ – 580 005 (ಕರ್ನಾಟಕ)

ದೂ:

0836-2214392