ಅನ್ವೇಷಣ

ಕೃಷಿ ಉದ್ಯಮಶೀಲತಾ ಮಾರ್ಗದರ್ಶನ ಕಾರ್ಯಕ್ರಮ

“ಅನ್ವೇಷಣ”– ಕೃಷಿ ಉದ್ಯಮಶೀಲತಾ ಮಾರ್ಗದರ್ಶನ ಕಾರ್ಯಕ್ರಮ

ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ – ರಫ್ತಾರ ಘಟಕ, ಭಾರತ ಸರಕಾರದ ಕೃಷಿ ಹಾಗೂ ರೈತರ ಕಲ್ಯಾಣ ಸಚಿವಾಲಯ, ನವದೆಹಲಿ ಬೆಂಬಲಿತ “ಕೃಷಿಕ” – ಕೃಷಿ ನವೋದ್ಯಮ ಪೋಷಣ ಕೇಂದ್ರ ಕೃ. ವಿ. ವಿ., ಧಾರವಾಡ, ಪರಿಚಯಿಸುವ “ಕೃಷಿ ಉದ್ಯಮಶೀಲತಾ ಮಾರ್ಗದರ್ಶನ ಕಾರ್ಯಕ್ರಮ”

ಕೃಷಿ ಉದ್ಯಮ ಸಂಬಂಧಿತ ನವೀನ ಯೋಚನೆ, ಯೋಜನೆ, ತಂತ್ರಜ್ಞಾನ, ವಿಚಾರಧಾರೆ ಹೊಂದಿರುವ ಯುವಕ-ಯುವತಿಯರು, ವಿದ್ಯಾರ್ಥಿ-ವಿದ್ಯಾರ್ಥಿನಿಯರು, ಪ್ರಗತಿಪರ ರೈತ/ರೈತ ಮಹಿಳೆಯರು ಹಾಗೂ ಆಸಕ್ತರಿಂದ ಕೃಷಿ ನವೋದ್ಯಮ ಸ್ಥಾಪನೆಗೆ ಪ್ರೋತ್ಸಾಹಿಸುವ ಉದ್ಯೋಗಶೀಲತಾ ಮಾರ್ಗದರ್ಶನ ಕಾರ್ಯಕ್ರಮಕ್ಕೆ. ಪ್ರಸ್ತುತ ಕಾರ್ಯಕ್ರಮವು ಎರಡು ತಿಂಗಳ ತರಬೇತಿಯೊಂದಿಗೆ ಕೈಯಾಸರೆ ಒದಗಿಸುವುದು. ಸದರಿ ಕಾರ್ಯಕ್ರಮದಲ್ಲಿ ಆಯ್ಕೆಯಾದ ಸಂಭಾವ್ಯ ನವೋದ್ಯಮಿಗಳಿಗೆ ತಮ್ಮ ಪರಿಕಲ್ಪನೆ/ವಿನೂತನ ತಂತ್ರಜ್ಞಾನ/ಉತ್ಪನ/ಕೃಷಿ ಸೇವೆಯನ್ನು ವಾಣಿಜ್ಯೀಕರಣಗೊಳಿಸಲು ಗರಿಷ್ಟ ರೂ. 5.00 ಲಕ್ಷದವರೆಗಿನ ಶೇ. 90 ರಷ್ಟು ಅನುದಾನವನ್ನು ಪಡೆಯಲು ಕೃಷಿ ನವೋದ್ಯಮ ಪೋಷಣ ಕೇಂದ್ರದ ಮುಖಾಂತರ ಶಿಫಾರಸ್ಸು ಮಾಡಲಾಗುವದು.

ಕೃಷಿ ನವೋದ್ಯಮ ಸ್ಥಾಪನೆಗೆ ಮಾರ್ಗದರ್ಶನ ಒದಗಿಸುವ ಕಾರ್ಯಕ್ರಮವು ವಿನೂತನ ಪರಿಕಲ್ಪನೆ/ಆವಿಷ್ಕಾರ/ವಿಚಾರಧಾರೆ ಹೊಂದಿದ ಯುವಕ-ಯುವತಿಯರು, ವಿದ್ಯಾರ್ಥಿ-ವಿದ್ಯಾರ್ಥಿನಿಯರು, ಪ್ರಗತಿಪರ ರೈತ/ರೈತ ಮಹಿಳೆಯರು ಹಾಗೂ ಆಸಕ್ತರಿಗೆ ಎರಡು ತಿಂಗಳ ಅವಧಿಯ ಕೈಯಾಸರೆ ಒದಗಿಸುವ ಕಾರ್ಯಕ್ರಮವಾಗಿರುತ್ತದೆ. ಈ ಕಾರ್ಯಕ್ರಮದಲ್ಲಿ ನುರಿತ ಹಾಗೂ ಯಶಸ್ವಿ ನವೋದ್ಯಮ ಸ್ಥಾಪಕರಿಂದ ತರಬೇತಿ/ಪರಿಕಲ್ಪನಾ ಟಿಪ್ಪಣಿ/ ತಂತ್ರಗಾರಿಕೆ ಹಾಗೂ ಪ್ರಾಯೋಗಿಕ ವಿವರಗಳನ್ನು ಒದಗಿಸಲಾಗುವುದು. ಅಲ್ಲದೇ, ಉದ್ಯಮವಲಯ ಹಾಗೂ ಮಾರುಕಟ್ಟೆ ಸವಾಲುಗಳನ್ನು ಎದುರಿಸುವ ತಂತ್ರಗಾರಿಕೆ ರೂಪಿಸುವ ಉದ್ಯಮಶೀಲತಾ ತರಬೇತಿ ನೀಡಲಾಗುವುದು.

ಎರಡು ತಿಂಗಳ ತರಬೇತಿಯನ್ನು ಯಶಸ್ವಿಯಾಗಿ ಪೂರೈಸಿದ ಅಭ್ಯರ್ಥಿಗಳಿಗೆ ಕೃಷಿ ನವೋದ್ಯಮ ಪೋಷಣ ಕೇಂದ್ರದ ಮುಖಾಂತರ ಕಾರ್ಯಸಾಧುವಾದ ವಿವಿಧ ವಿನೂತನ ಕೃಷಿ ನವೋದ್ಯಮಗಳ (sಣಚಿಡಿಣuಠಿs) ಅವಿಷ್ಕಾರ/ಯೋಚನಾ ಲಹರಿ/ತಂತ್ರಜ್ಞಾನ/ಕೃಷಿಸೇವೆ ಇತ್ಯಾದಿಗಳನ್ನು ಕಾರ್ಯಗತಗೊಳಿಸಲು ಮಾರ್ಗದರ್ಶನ ನೀಡಲಾಗುವುದು. ಸದರಿ ನವೋದ್ಯಮಿಗಳು ರೂ. 5.00 ಲಕ್ಷದವರೆಗೆ ಪೂರ್ವ ಹಂತದ ಧನಸಹಾಯಕ್ಕೆ ಅರ್ಹರಾಗಿರುತ್ತಾರೆ.

 • 01 ಉದ್ದೇಶಗಳು:
   1. ಸಂಭಾವ್ಯ ಕೃಷಿ ಉದ್ಯಮಿಗಳಿಗೆ ತರಬೇತಿ ಹಾಗೂ ಮಾರ್ಗದರ್ಶನದ ಮೂಲಕ ವಿನೂತನ ಕೃಷಿ ನವೋದ್ಯಮ ಆರಂಭಿಸಲು ಪ್ರಾಯೋಗಿಕ, ತಾಂತ್ರಿಕ ಮತ್ತು ಔದ್ಯೋಗಿಕ ಮಾರ್ಗದರ್ಶನ ಒದಗಿಸುವುದು.
   1. ಕೃಷಿ ಉದ್ಯಮಗಳನ್ನು ಸ್ಥಾಪಿಸುವ ಸಂಭಾವ್ಯ ಅಭ್ಯರ್ಥಿಗಳಿಗೆ ಕೃಷಿ ನವೋದ್ಯಮ ಪೋಷಣ ಕೇಂದ್ರದ ಮೂಲಕ ಉತ್ತೇಜಿಸುವುದು.
   1. ಕೃಷಿ ನವೋದ್ಯಮ ಸ್ಥಾಪನೆಗೆ ಪೂರಕವಾಗಿರುವ ನಾವಿನ್ಯಪೂರ್ಣ ಯೋಜನೆ/ತಂತ್ರಜ್ಞಾನ/ವಿಚಾರದಾರೆ ಹೊಂದಿರುವವರಿಗೆ ಆಕರ್ಷಕ ಸ್ವಯಂವೃತ್ತಿ ನೆಲೆ ಒದಗಿಸುವುದು.
   1. ಕೃಷಿ ಹಾಗೂ ಕೃಷಿ ಪೂರಕ ವಲಯಗಳ ದಕ್ಷತೆ/ಉತ್ಪಾದನೆ ಹೆಚ್ಚಿಸುವ ತಂತ್ರಜ್ಞಾನ/ಸೇವೆಯ ಉದ್ಯಮ ನೆಲೆಯಾಧಾರಿತ ಕನಿಷ್ಟ ಒಂದು ವಿನೂತನ ಯೋಜನೆಯನ್ನು ಹೊಂದಿರಬೇಕು.
   1. ಅರ್ಜಿದಾರರು ಪೂರ್ಣಾವಧಿ ಕೃಷಿ ಉದ್ಯಮ ಹೊಂದುವ ಆಕಾಂಕ್ಷಿಗಳಾಗಿರಬೇಕು.
   1. ಅರ್ಜಿದಾರರು ತಮ್ಮ ನವೀನ/ನಾವಿನ್ಯಪೂರ್ಣ ನವೋದ್ಯಮ ಪರಿಕಲ್ಪನೆಗಳ ಅಭಿವೃಧ್ದಿಗಾಗಿ ಸೂಕ್ತ ಔದ್ಯೋಗಿಕ ಯೋಜನೆ/ಪ್ರಸ್ತಾವನೆ ಹೊಂದಿರಬೇಕು.
   1. “ಕೃಷಿಕ” –ಕೃಷಿ ನವೋದ್ಯಮ ಪೋಷಣ ಕೇಂದ್ರ ಕೃ. ವಿ. ವಿ., ಧಾರವಾಡ ಮೂಲಕ ಆಯ್ಕೆ ಮಾಡಲಾಗುವುದು.
   1. ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿಚ್ಚಿಸುವವರು ನಿಗದಿತ ಅರ್ಜಿ ಸಲ್ಲಿಸಬೇಕು.
   1. ಪೂರ್ಣಾವಧಿಗಾಗಿ ಕೃಷಿ ಉದ್ಯಮಗಳನ್ನು ಸ್ಥಾಪಿಸಿ ಮುಂದುವರೆಸಲು ಆಸಕ್ತಿ ಹೊಂದಿರುವ ಹಾಗೂ ವಿನೂತನ ತಂತ್ರಜ್ಞಾನ, ಸೇವಾವಲಯ ಹಾಗೂ ಉದ್ಯಮ ಸ್ಥಾಪಿಸಲು ಉತ್ಸುಕರಾಗಿರುವ ಅಭ್ಯರ್ಥಿಗಳನ್ನು ಕೃವಿವಿಯ ಆಯ್ಕೆ ಸಮಿತಿ ಮೂಲಕ ಆಯ್ಕೆ ಮಾಡಲಾಗುವುದು.
   1. ಕೃಷಿ ನವೋದ್ಯಮದ ಕಾರ್ಯಸಾಧ್ಯವಾದ ನವೀನ ಪರಿಕಲ್ಪನೆ ಹೊಂದಿರುವ 30 ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು. ಪ್ರಾಥಮಿಕವಾಗಿ ಆಯ್ಕೆಯಾದ ಅಭ್ಯರ್ಥಿಗಳು ತಮ್ಮ ಪ್ರಸ್ತಾವನೆಯನ್ನು ಸಮಿತಿಯ ಮುಂದೆ ಮಂಡಿಸಲು ಸ್ವಂತ ಖರ್ಚಿನಲ್ಲಿ ಹಾಜರಾಗಬೇಕಾಗುವುದು.
   1. ಸದರಿ ಕಾರ್ಯಕ್ರಮವು ಎರಡು ತಿಂಗಳ ತರಬೇತಿಯಾಗಿರುತ್ತದೆ.
   1. ಕಾರ್ಯಕ್ರಮವನ್ನು ಯಶಸ್ವಿಯಾಗಿ ಪೂರೈಸಿದ ಅಭ್ಯರ್ಥಿಗಳಿಗೆ ಪೂರ್ಣಾವಧಿ ಉದ್ಯಮ ಸ್ಥಾಪಿಸಲು ಗರಿಷ್ಟ ರೂ. 5.00 ಲಕ್ಷದವರೆಗೆ (ಶೇ. 90) ಆರಂಭಿಕ ಅನುದಾನವನ್ನು ಆಯ್ಕೆಯಾದ ನವೋದ್ಯಮಿಗಳಿಗೆ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ – ರಫ್ತಾರ ಘಟಕ, ಭಾರತ ಸರಕಾರದ ಕೃಷಿ ಹಾಗೂ ರೈತರ ಕಲ್ಯಾಣ ಸಚಿವಾಲಯದ ಮೂಲಕ ನೀಡಲು ಶಿಫಾರಸು ಮಾಡಲಾಗುವುದು.
   1. ಆಯ್ಕೆಯಾದ ನವೋದ್ಯಮ ಆಕಾಂಕ್ಷಿಗಳಿಗೆ 60 ಗಂಟೆಗಳ ಆರಂಭಿಕ ತರಬೇತಿಯನ್ನು “ಕೃಷಿಕ” –ಕೃಷಿ ನವೋದ್ಯಮ ಪೋಷಣ ಕೇಂದ್ರ, ಕೃ. ವಿ. ವಿ., ಧಾರವಾಡ ವತಿಯಿಂದ ಒದಗಿಸಲಾಗುವುದು.
   1. ಸದರಿ ತರಬೇತಿಯೊಂದಿಗೆ ಅಭ್ಯರ್ಥಿಗಳು ತಮ್ಮ ನಾವೀನ್ಯಪೂರ್ಣ ಪರಿಕಲ್ಪನೆ/ತಂತ್ರಜ್ಞಾನ ಇತ್ಯಾದಿಗಳನ್ನು ಪರಿಕ್ಷಿಸಲು/ಪರಿಸ್ಕರಿಸಲು ಸೂಕ್ತ ಅವಕಾಶ ಕಲ್ಪಿಸುವುದು.
 

ಪ್ರಮುಖ ಕ್ಷೇತ್ರಗಳು:

 • ಸಾವಯವ ಕೃಷಿ/ಜೈವಿಕ ಪರಿಕರಗಳು

 • ಕೋಯ್ಲೋತ್ತರ/ಆಹಾರ ತಂತ್ರಜ್ಞಾನ

 • ಪಶುಸಂಗೋಪನೆ/ಹೈನುಗಾರಿಕೆ

 • ಕೃಷಿ ಶಿಕ್ಷಣ ವಿಸ್ತರಣೆ

 • ಕೃಷಿ ಪರಿಕರ/ಸಾಧನ ತಂತ್ರಜ್ಞಾನ

 • ನಿಖರ ಕೃಷಿ

 • ಆಹಾರ ಸಂಸ್ಕರಣೆ

 • ಎರೆ ಕೃಷಿ/ಕಸದಿಂದ ರಸ/ತ್ಯಾಜ್ಯ ವಿಲೆವಾರಿ

 • ಕೃಷಿ ಸರಬರಾಜು ಸರಪಳಿ

 • ಕೃತಕ ಬುದ್ದಿಮತ್ತೆ/ಮಾಹಿತಿ/ಜಾಲತಾಣ ತಂತ್ರಜ್ಞಾನ

 • ಕೃಷಿ ಯಾಂತ್ರಿಕರಣ

 • ಕೃಷಿ ಚಿಕಿತ್ಸೆ/ಆರೋಗ್ಯ ಸೇವೆಗಳು

 • ಕೃಷಿ ಜೈವಿಕ ತಂತ್ರಜ್ಞಾನ

 • ನೈಸರ್ಗಿಕ ಸಂಪನ್ಮೂಲ ನಿರ್ವಹಣೆ

 • ಕೃಷಿ ತಾಂತ್ರಿಕತೆಗಳು

ಮಾಹಿತಿಗಾಗಿ ಸಂಪರ್ಕಿಸಿ:

ವಿಳಾಸ:

ಪ್ರಧಾನ ಸಂಶೋಧಕರು ಹಾಗೂ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳು
“ಕೃಷಿಕ” – ಕೃಷಿ ನವೋದ್ಯಮ ಪೋಷಣ ಕೇಂದ್ರ
ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯ ರಫ್ತಾರ ಘಟಕ
ಕೃಷಿ ವಿಶ್ವವಿದ್ಯಾಲಯ, ಧಾರವಾಡ – 580 005 (ಕರ್ನಾಟಕ)

ದೂ:

0836-2214392